equivalent weight
ನಾಮವಾಚಕ

(ರಸಾಯನವಿಜ್ಞಾನ) ಸಮಾನ ತೂಕ:

  1. (ಧಾತುಗಳ ವಿಷಯದಲ್ಲಿ) 8 ತೂಕಮಾನ ಆಕ್ಸಿಜನ್‍ ಯಾ 1.008 ತೂಕಮಾನ ಹೈಡ್ರೊಜನ್‍ ಯಾ 35.5 ತೂಕಮಾನ ಕ್ಲೋರೀನ್‍ ಜೊತೆಗೆ ಸಂಯೋಗವಾಗಬಲ್ಲ ಯಾ ಅಷ್ಟನ್ನು ಪಲ್ಲಟಿಸಬಲ್ಲ ಯಾ ಅಷ್ಟರಿಂದ ಪಲ್ಲಟಗೊಳ್ಳಬಲ್ಲ ಧಾತುವಿನ ತೂಕ ಎಷ್ಟು ಗ್ರ್ಯಾಂ ಆಗುವುದೋ ಆ ಸಂಖ್ಯೆ.
  2. (ಸಂಯುಕ್ತಗಳ ವಿಷಯದಲ್ಲಿ) ಪರಿಗಣಿಸಲಾದ ರಾಸಾಯನಿಕ ಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುವ ಧಾತು (ಉದಾಹರಣೆಗೆ ತಟಸ್ಥೀಕರಣದಲ್ಲಿ ಹೈಡ್ರೊಜನ್‍, ಉತ್ಕರ್ಷಣಕ್ರಿಯೆಯಲ್ಲಿ ಆಕ್ಸಿಜನ್‍, ಇತ್ಯಾದಿ) ಒಂದು ಗ್ರಾಂ ಸಮಾನ ತೂಕವನ್ನು ಪಡೆದಿರುವ ಯಾ ಅಷ್ಟನ್ನು ನೀಡಬಲ್ಲ ಯಾ ಅಷ್ಟರೊಡನೆ ವರ್ತಿಸಬಲ್ಲ ಸಂಯುಕ್ತದ ತೂಕ ಎಷ್ಟು ಗ್ರ್ಯಾಂ ಆಗುವುದೋ ಆ ಸಂಖ್ಯೆ.